ರಿಯಾದ್, ನವೆಂಬರ್ 3: ನಗರದಲ್ಲಿ ಕಾರ್ಯನಿರತವಾಗಿರುವ ಭಟ್ಕಳ ಮುಸ್ಲಿಂ ಜಮಾತ್ (ಬಿ.ಎಂ.ಜೆ) ಸಂಘಟನೆ ತನ್ನ ದ್ವೈವಾರ್ಷಿಕ ಚುನಾವಣೆಯನ್ನು ಈದ್ ಉಲ್ ಅಧಾ ದಿನದಂದೇ ನಡೆಸಲು ನಿರ್ಧರಿಸಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ರುಕ್ನುದ್ದೀನ್ ರವರು ತಿಳಿಸಿದ್ದಾರೆ.
ಈದ್ ಉಲ್ ಅಧಾ ದಿನದಂದೇ ಸಂಘಟನೆಯ ದ್ವೈವಾರ್ಷಿಕ ಚುನಾವಣೆ, ವಾರ್ಷಿಕ ಸಭೆ ಮತ್ತು ಈದ್ ಮಿಲನ್ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ನಗದರ ಅಲ್ ಅಜೀಜಿಯಾದಲ್ಲಿರುವ ಇಸ್ತ್ರಾಹ್ ಸಯೀದಿ ಸಭಾಂಗಣದಲ್ಲಿ ನಡೆಸಲಾಗುವುದು. ಕಾರ್ಯಕ್ರಮ ಬೆಳಿಗ್ಗೆ ಎಂಟು ಘಂಟೆಗೆ ಪ್ರಾರಂಭವಾಗಲಿದ್ದು ಮೊದಲಿಗೆ ಪವಿತ್ರ ಖುರ್ಬಾನಿ ಯನ್ನು ನೆರವೇರಿಸಲಾಗುವುದು. ಆ ಬಳಿಕ ದ್ವೈವಾರ್ಷಿಕ ಚುನಾವಣೆ ಮತ್ತು ವಾರ್ಷಿಕ ಸಭೆಯನ್ನು ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಹಲವು ಮನರಂಜನಾ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದ್ದು ಸರ್ವಸದಸ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅವರು ನಿವೇದಿಸಿಕೊಂಡಿದ್ದಾರೆ.
ಈ ವರ್ಷ ಪವಿತ್ರ ಹಜ್ ಯಾತ್ರೆ ನೆರವೇರಿಸುವ ಸದಸ್ಯರು ಹಾಗೂ ರಜಾಕಾಲದಲ್ಲಿ ಊರಿಗೆ ತೆರಳಲಿರುವ ಸದಸ್ಯರಿಗಾಗಿ ವಿಶೇಷವಾಗಿ ನವೆಂಬರ್ ೧೬ ರಂದು ರಿಯಾದ್ ಟೆಕ್ಸ್ ಟೈಲ್ಸ್ ಅಂಗಡಿಯಲ್ಲಿ ಸಂಜೆ ಏಳರಿಂದ ರಾತ್ರಿ ಹನ್ನೊಂದರ ನಡುವೆ ಮತದಾನ ನೀಡುವ ಅವಕಾಶವನ್ನು ಕಲ್ಪಿಸಲಾಗಿದ್ದು ಸದಸ್ಯರು ಚುನಾವಣಾ ಕಾರ್ಯದರ್ಶಿಯವರನ್ನು ಭೇಟಿಯಾಗಿ ತಮ್ಮ ಮತಪತ್ರಗಳನ್ನು ಪಡೆದುಕೊಳ್ಳಬೇಕೆಂದು ಪ್ರಕಟಣೆಯಲ್ಲಿ ವಿನಂತಿಸಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಬಹುಮಾನಗಳನ್ನು ಪ್ರಾಯೋಜಿಸಲಿಚ್ಛಿಸುವವರು ಬಹುಮಾನಗಳನ್ನು ಅಥವಾ ಸಮಮೊತ್ತದ ಮೊಬಲಗನ್ನು(ಕನಿಷ್ಟ ನೂರು ರಿಯಾಲ್) ಜನಾಬ್ ಅಬ್ದುಲ್ ಅಲೀಂ ಕಾಝಿಯಾರಿಗೆ ನೀಡಲು ವಿನಂತಿಸಿಕೊಳ್ಳಲಾಗಿದೆ.